St. Joseph's College, 36 Lalbagh Road, Bangalore, Karnataka
140 ವರ್ಷಗಳ ಇತಿಹಾಸವುಳ್ಳ ಬೆಂಗಳೂರಿನ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆ ಸಂತ ಜೋಸೆಫರ ಕಾಲೇಜು. ಸೆಂಟ್ರಲ್ ಕಾಲೇಜನ್ನುಬಿಟ್ಟರೆ ಬೆಂಗಳೂರು ನಗರದ ಎರಡನೇ ಅತ್ಯಂತ ಹಳೆಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2004 ರಲ್ಲಿ ನಮ್ಮ ಕಾಲೇಜು ಸ್ವಾಯುತ್ತತೆಯನ್ನು ಪಡೆದು ಅಭಿವೃದ್ಧಿ ಹೊಂದಿತ್ತು. ಹಲವಾರು ಆಯಾಮಗಳ ಶೈಕ್ಷಣಿಕ ಸಾಧ್ಯತೆಗಳನ್ನು ಸಕಾರಗೊಳಿಸಿಕೊಳ್ಳುವುದರ ಜೊತೆಗೆ ಯುವ ಜನಾಂಗದ ಭವಿಷ್ಯ ರೂಪಿಸುತ್ತಾ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಸಂಘವು ನಾಡಿನ ಭಾಷೆಯನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ನಡೆಸುತ್ತಾ ಬಂದಿದೆ. ಕನ್ನಡ ಸಾಹಿತ್ಯ ಇತ್ತೀಚಿನ ದಿನ ಮಾನಸದಲ್ಲಿ ಹೊಸ ಹೊಸ ಓದುಗರನ್ನು ಆಹ್ವಾನಿಸುತ್ತಾ ಬೆಳವಣಿಗೆ ಹೊಂದುತ್ತಿದೆ. ತಮ್ಮ ತಮ್ಮ ಗ್ರಹಿಕೆಗಳಿಗೆ ಅನುಗುಣವಾಗಿ ಓದುಗರು ಸಾಹಿತ್ಯವನ್ನು ಪರಿಪಾಲಿಸುತ್ತಿದ್ದಾರೆ. ವಿವಿಧ ಜ್ಞಾನ ಶಿಸ್ತುಗಳ ಹಿನ್ನೆಲೆಯಲ್ಲಿ ಭಿನ್ನ ಮನೋಧರ್ಮಗಳ ಮುನ್ನಲೆಯಲ್ಲಿ ಕನ್ನಡ ಸಾಹಿತ್ಯ ನೂತನ ಚಿಂತನೆಗೆ ತೆರೆದುಕೊಳ್ಳುತ್ತಿದೆ.